ಗುಬ್ಬಿಯ ಜೊತೆ ಸಂವಾದ(Conversation with a sparrow)

ಮುಂಜಾವಿನ ಚಳಿಯಲಿ ನಾ ಹೊರಟೆ ಹಳ್ಳದ ಬದಿಯಲಿ
ಕಿವಿ ತುಂಬಿತು ಹಕ್ಕಿಯ ಚಿಲಿಪಿಲಿ
ಸಂತಸವೇಕೋ ತಿಳಿಯದು ಈ ಮನದಲಿ
ಅಡಗಿದೆ ಏನೋ ಈ ಪ್ರಕೃತಿ ಮಡಿಲಲಿ

ಗುಬ್ಬಿಯು ಒಂದು ನೋಡಿತು ನನ್ನ
ಕೇಳಿತು ಒಬ್ಬನೇ ನಗುತಿರುವ ಕಾರಣವನ್ನ
ಹೇಳಿದೆ ನಾನು “ಸವಿಯುತ್ತಿರುವೆ ಹಳ್ಳಿಯ ಸೊಬಗನ್ನ
ಸಹಿಸಿ ಸಾಕಾಗಿ ನಗರದ ಧೂಳನ್ನ”

ಗುಬ್ಬಿಗೆ ತಿಳಿಯದಾಯಿತು ನನ್ನ ಹೇಳಿಕೆಯ
ಅರೆಘಳಿಗೆ ಯೋಚಿಸಿ ನೀಡಿತೊಂದು ಸಲಹೆಯ
“ಬಿಟ್ಟು ಬಾ ನಗರದ ಆ ಹೊರೆಯ ಮರಳಿ ಸಿಗದು ನಿನಗೆ ಈ ಸಮಯ”

ನಾನು: “ಅಯ್ಯೋ ಗುಬ್ಬಿ! ನನ್ನ ಪಾಡು ನಿನಗೆ ಹೇಗೆ ತಿಳಿದೀತು!
ನಿನ್ನ ಹಾಗೆ ಎರಡು ಧಾನ್ಯ ತಿಂದರೇನು ಹೊಟ್ಟೆ ತುಂಬಿತು!”

ಗುಬ್ಬಿ: “ನಿನ್ನ ಕರ್ಮಕ್ಕೆ ನೀನೇ ಹೊಣೆ
ಹಳ್ಳಿ-ವನವೊಂದೇ ನನ್ನ ಮನೆ, ಬಂದರೂ ಇಲ್ಲಿಗೆ ಮಾಡದಿರು ಇದರ ಕೊನೆ…

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s