ಕನ್ನಡ

ಕಲಿ-ಕಲಿಸು ಕನ್ನಡ

ಕೇಳಿ-ಕೇಳಿಸು ಕನ್ನಡದ ಇಂಪು

ಹರಡು-ಹರಡಿಸು ಕನ್ನಡದ ಕಂಪು

ಧುಮುಕಿ-ಧುಮುಕಿಸು ಕನ್ನಡ ಪದಗಳ ಸಾಗರದಲಿ

ಆರಿತು-ಅರಿತವ ಸದಾ ಇರುವನು ಇದರ ಸಾಂಗತ್ಯದಲ್ಲಿ

ನನ್ನಂತೆ…

‘ನಾನೊಬ್ಬ ಸೋತಿಹೆನು’ ಎನ್ನುವಲ್ಲಿ

ನನ್ನೊಬ್ಬ, ಇನ್ನೊಬ್ಬ ಸೋತಿಹನು..

‘ನಾನೇನು ಮಹಾ ಇಲ್ಲಿ’ ಎನ್ನುವಲ್ಲಿ

ನನ್ನೊಬ್ಬ, ಇನ್ನೊಬ್ಬ ಹುಟ್ಟಿಹನು..

ಜನನಾಯಕ | People’s President

ಓ ದಿಟ್ಟ ನಾಯಕ! ನೀನು ನಮಗೆ ಪ್ರೇರಕ
ನಿನ್ನ ಈ ಕಾಯಕ ಮೆಚ್ಚಿಹನು ನಿಜ ನಾಗರಿಕ
ಅಗಲಿ ನಿನ್ನ ಮೂಡಿದೆ ಮರುಕ
ಯುವ ಪೀಳಿಗೆಗೆ ನಿನ್ನೊಬ್ಬ ನಿಜ ಸೂಚಕ
#ಎಪಿಜೆಅಬ್ದುಲ್ ಕಲಾಮ್ #ಶ್ರದ್ಧಾಂಜಲಿ

ನಿನಗೆ ನೀನೇ ಆಸರೆ..

ನಿನ್ನ ಹೊರೆಯ ನೀ ಹೊರುವದು ನಿನ್ನ ಧರ್ಮ
ಯಾರು ಹೊರದಿದ್ದಲ್ಲಿ ಅದು ನಿನ್ನ ಕರ್ಮ
ಚಿಂತೆಗೀಡಾಗದೆ ಸ್ಮರಿಸು ದೇವಾನಾಮ
ದೇವನೂ ಒಲಿಯದಿದ್ದಲ್ಲಿ ನಿನ್ನದು ಮಾರಣಹೋಮ

ಯಾವುದು ನನ್ನದು?

ಗಳಿಸಿದ ಹೆಗ್ಗಳಿಕೆ
ಹಿಡಿದ ಬಿಕ್ಕಳಿಕೆ
ಯಾವುದೂ ಶಾಶ್ವತವಲ್ಲ..
ನಿದ್ರೆ ನಿನ್ನದಲ್ಲ
ನೀನು ನಿದ್ರೆಯದು
ನಿದ್ರೆ ಕನಸಿನದು
ಕನಸು ಕಣ್ಣಿನದು
ಕಣ್ಣು ಕಂಡಿದ್ದು
ಕಂಡಿದ್ದು ಪರರದು
ಪರರು ನಿನ್ನದಲ್ಲ
ಅದಕ್ಕೆ ಖಾಲಿ ಕೈಲಿ ಬರೋದು
ಖಾಲಿ ಕೈಲಿ ಹೋಗೋದು..
ಅಲ್ಲಿಯವರೆಗೂ ನಿನ್ನ ದೇಹ, ಯೋಚನೆ ಹೊರತು
ಎಲ್ಲ ಪರರದು..
ಒಮ್ಮೊಮ್ಮೆ ಸ್ವಂತ ಮರ್ಯಾದೆಯೂ ನಿನ್ನ ಕೈಲಿರೋಲ್ಲ.

ಅವಳ ನೆನಪು | Remembering her

ದಿನಗಳು ಉರಳಿದವು ನಿನ್ನ ನೋಡಿ
ಬರುವೆ ನೆನಪಲಿ-ಕನಸಲಿ ಓಡಿ ಓಡಿ
ನನ್ನ ಮೇಲೆ ನೀ ಮಾಡಿರುವೆ ಅದೆಂಥ ಮೋಡಿ
ನಿನ್ನ ನೆನೆಯುವದು ನನಗಾಗಿದೆ ರೂಢಿ
ನೀ ಕಾಣದಿರಲು ಮನ ಕೊರಗಿದೆ ಹೂವಿನಂತೆ ಬಾಡಿ..